Posts

Showing posts from October, 2026

ಮೌಲ್ಯಗಳ ಮಾಪನದಲ್ಲಿ ಸಾಧನ ಮತ್ತು ತಂತ್ರಗಳು

  ಮೌಲ್ಯಗಳ ಮಾಪನದಲ್ಲಿ ಸಾಧನ ಮತ್ತು ತಂತ್ರಗಳು (Tools and Techniques of value assessment) 1. ಸ್ವಯಂ-ಮೌಲ್ಯಮಾಪನ (Self-appraisal):        ಮೌಲ್ಯಶಿಕ್ಷಣದಲ್ಲಿ ಸ್ವಯಂ ಮೌಲ್ಯಮಾಪನ ಎಂದರೆ ಒಬ್ಬ ವ್ಯಕ್ತಿ ಅಥವಾ ವಿದ್ಯಾರ್ಥಿ ತನ್ನ ನಡವಳಿಕೆ, ಯೋಚನೆಗಳು, ನೈತಿಕ ನಿಲುವುಗಳು ಮತ್ತು ಕಾರ್ಯಗಳನ್ನು ತಾನೇ ಪರಾಮರ್ಶಿಸಿ ತಿದ್ದಿಕೊಳ್ಳುವ ಒಂದು ಪ್ರಮುಖ ಸಾಧನವಾಗಿದೆ. ಪ್ರಮುಖ ಪಾತ್ರ ಮತ್ತು ಮಹತ್ವ: 1.      ಸ್ವಯಂ ಅರಿವು : ವ್ಯಕ್ತಿಯು ತನ್ನ ಸದ್ಗುಣಗಳು (ಸತ್ಯ, ಪ್ರಾಮಾಣಿಕತೆ, ಕರುಣೆ) ಹಾಗೂ ದೋಷಗಳನ್ನು (ಕೋಪ, ಅಸೂಯೆ, ಸ್ವಾರ್ಥ) ಸ್ವತಃ ಗುರುತಿಸಲು ಇದು ನೆರವಾಗುತ್ತದೆ. 2.      ಆತ್ಮಾವಲೋಕನ: ತಾನು ತೆಗೆದುಕೊಂಡ ನಿರ್ಧಾರಗಳು ಮತ್ತು ಮಾಡಿದ ಕೆಲಸಗಳು ನೈತಿಕವಾಗಿ ಸರಿಯೇ ಅಥವಾ ತಪ್ಪೇ ಎಂದು ಆಳವಾಗಿ ಚಿಂತಿಸಿ ಪ್ರಕ್ರಿಯೆಯನ್ನು ಇದು ಕಲಿಸುತ್ತದೆ. 3.      ಸ್ವಯಂ ಸುಧಾರಣೆ : ಬಾಹ್ಯ ಒತ್ತಡ ಅಥವಾ ಶಿಕ್ಷೆಯ ಭಯವಿಲ್ಲದೆ, ತಾನಾಗಿಯೇ ತನ್ನ ತಪ್ಪುಗಳನ್ನು ಅರಿತು ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಪ್ರೇರೇಪಿಸುತ್ತದೆ. 4.      ವೈಯಕ್ತಿಕ ಹೊಣೆಗಾರಿಕೆ : ಇತರರನ್ನು ದೂಷಿಸುವ ಬದಲು, ತನ್ನ ಆಲೋಚನೆ ಮತ್ತು ನಡವಳಿಕೆ ತಾನೇ ಸಂಪೂರ್ಣ ಜವಾಬ್ದಾರಿಯನ...

ಮೌಲ್ಯಶಿಕ್ಷಣದ ವಿಧಾನಗಳು ಮತ್ತು ಮೌಲ್ಯಮಾಪನ

  ಮೌಲ್ಯಶಿಕ್ಷಣದ ವಿಧಾನಗಳು ಮತ್ತು ಮೌಲ್ಯಮಾಪನ (Approaches and Assessment of Value Education) ನೇರವಿಧಾನ (Direct Approach):          ನಿರ್ದಿಷ್ಠ ಪಠ್ಯಕ್ರಮ, ನೀತಿ ಕಥೆಗಳು, ಉಪನ್ಯಾಸಗಳು ಮತ್ತು ವಿಶೇಷ ಅವಧಿಗಳ ಮೂಲಕ ಮೌಲ್ಯಗಳನ್ನು ನೇರವಾಗಿ ಬೋಧಿಸುವುದು. ಉದಾಹರಣೆ: ಸತ್ಯ, ಪ್ರಾಮಾಣಿಕತೆ, ಸಮಾನತೆ ಕುರಿತು ನೇರ ಪಾಠಗಳು. ಬೋಧನಾ ತಂತ್ರಗಳು: 1. ಹಾಡುಗಳ ಮೇಲಿನ ಚಿಂತನೆ ಮತ್ತು ಹಂಚಿಕೊಳ್ಳುವಿಕೆ (Sharing and reflections on Songs): ಮೌಲ್ಯಶಿಕ್ಷಣದ ನೇರ ವಿಧಾನದಲ್ಲಿ ಹಾಡುಗಳ ಮೇಲಿನ ಚಿಂತನೆ ಮತ್ತು ಹಂಚಿಕೊಳ್ಳುವಿಕೆ ಅತ್ಯಂತ ಪರಿಣಾಮಕಾರಿಯಾದ ಬೋಧನಾ ತಂತ್ರವಾಗಿದೆ. ಸಂಗೀತವು ನೇರವಾಗಿ ಭಾವನೆಗಳನ್ನು ತಲುಪುವುದರಿಂದ, ಇದು ಮೌಲ್ಯಗಳನ್ನು ಆಳವಾಗಿ ಗ್ರಹಿಸಲು ನೆರವಾಗುತ್ತದೆ. ಕಾರ್ಯವಿಧಾನ/ಪ್ರಕ್ರಿಯೆ:                       i.         ದೇಶಭಕ್ತಿಗೀತೆಗಳು, ವಚನಗಳು, ದಾಸರ ಪದಗಳು, ತತ್ವಪದಗಳು ಅಥವಾ ಭಾವಗೀತೆಗಳಂತಹ ನೈತಿಕ ಮತ್ತ ಸಾಮಾಜಿಕ ಸಂದೇಶವಿರುವ ಹಾಡುಗಳನ್ನು ಆರಿಸುವುದು.         ...